Monday, February 18, 2008

ಸುಖವೇ ಎಲ್ಲ...

ನಿನ್ನ ತಬ್ಬಿದೊಡೆ ನನ್ನಲ್ಲಿ
ಏನೋ ಏನೋ ಕಳ್ಳ ಭಾವನೆಗಳು
ಅಂಗ ಅಂಗಗಳಲೂ ಏನೋ ನವಿರಾದ
ರೋಮಾಂಚನ... ಮೈಯೆಲ್ಲವೂ ರೋಮಾಂಚನಾ ॥


ಹೇಗೇಗೋ ಕಾಡುವೆ ನೀನು
ಕಾಡಿ ಮುದ್ದಾಡಿಸುವೆ ನೀನು ನನ್ನನಪ್ಪಿ
ನನ್ನೆದೆಯ ಒಳಗೆ ಎದೆಬಡಿತದಾ ಸದ್ದು
ಎದೆ ಮೇಲೆ ನಿನ್ನ ಬೆರಳ ಬಡಿತದ ಲಯವೂ...ಓ ನಲ್ಲೆಯೇ॥

ಎಳೆಯದಿರು ನನ್ನೆದೆಯ ಕೂದಲ
ಹುಚ್ಚು ಹಿಡಿಯುವುದು ಎನಗೆ ಹುಚ್ಹನಾಗುವೆ ನಾನು
ನನ್ನ ಪ್ರೇಮದ ಹುಚ್ಚಲ್ಲಿ ಹುಚ್ಹು ಹಿಡಿಸುವೆನು ನಿನಗೆ
ಕೆಣಕದಿರು ಸಲ್ಲಾಪದ ಸಮಯವಿದು ಕೊಡು ಮುತ್ತು ಕತ್ತಿನ ಕೆಳಗೆ॥

ಹೇ ಬಿಡು ಕಿವಿಯನ್ನು
ಕಚ್ಚದಿರು ಕಳ್ಳಿ ಕೆದರುತಿದೆ ಆಸೆಯು
ಓ ನಿನ್ನ ಉಗುರುಗಳು ಪರಚುತಿವೆ ಬೆನ್ನನ್ನು
ರಸಿಕತೆಯಲಿ ನನ್ನೇ ಮೀರಿಸುವೆ... ಬಲು ಜೋರು ನೀನು॥

ಈ ತಂಪು ತಂಗಾಳಿ
ಆದರೆ ನಿನ್ನಾ ಈ ಬಿಸಿಯುಸಿರು
ಇಂಥಾ ಚಳಿಯಲ್ಲು ಕೂಡಾ ಬೆವರುತಿವೆ ಅಂಗಾಂಗಗಳು
ಬೆಚ್ಚನೆಯ ನಿನ ಮೈಯಲ್ಲಿ ಕರಗುತಿವೆ...ನನ ಬಯಕೆಗಳು॥

ಮಾತಿಲ್ಲ ಮೌನವಾಗಿ
ಕೋಣೆಯೊಳು ತುಂಬಿದೆ ಬಿಸಿಹವೆಯು
ರಾಸಲೀಲೆಯ ಮತ್ತು ಏರುತಿದೆ ಕ್ಷಣಕ್ಷಣಕೂ
ತಡಕಾಡುತಿವೆ ಕೈಗಳು ಸವರುತಿವೆ ದೇಹಗಳಾ...ಅಂಗಾಂಗಳನೂ॥

ನಿನ್ನ ಅಧರಗಳಲಿ ಬಚ್ಚಿರುವ
ಸುರೆಯ ಸವಿಯ ಜೊತೆಗೇರುತಿದೆ ಅಮಲು
ಏರಿಳಿಯುತಿರುವ ದೇಹಗಳು ದಣಿಯಲೊಲ್ಲವು
ಸುಖದ ಉತ್ತುಂಗ ಸ್ಠಿತಿಯು ಬಲು ಹತ್ತಿರಾ...ಅನುಭವಿಸುತಿದೆ ದೇಹ॥

ಓ ಎಲ್ಲಿ ನಾವೀಗ
ಮುಚ್ಚಿದಾ ಕಣ್ಣುಗಳೊಳಗೆ ಕಾಣುತಿದೆ ಹೊಸಲೋಕ
ಹೊರಹೊಮ್ಮಿದೆ ಸುಖದಾ ಸಿಂಚನವು ದಣಿಯುತಿವೆ ಮೈಗಳು
ರಾಸಲೀಲೆಯಾ ಮತ್ತು ಇಳಿಯುತಿದೆ ಮೆಲ್ಲಗೆ...ಕೊನೆಗೊಂದು ಸವಿಮುತ್ತಿನೊಡನೆ॥

Wednesday, October 24, 2007

ವಿಷಾದ

ಕಾಡುತಿದೆ ಕನಸೊಂದು
ಜಗ ಗೆದ್ದೆ ನಾನೆಂದು
ಗೆದ್ದ ಮಾತಿರಲಿ ಬದಿಯಲ್ಲಿ
ಗೆಲಲಾಗಲಿಲ್ಲ ಹೃದಯ।

ಬೇಡುತಿದೆ ಮನಸಿಂದು
ಒಲವೊಮ್ಮೆ ಸಿಗಲೆಂದು
ಒಲವ ಮಾತಿರಲಿ ಬದಿಯಲ್ಲಿ
ಸಿಗದೆ ಹೋದೆಯಾ ಗೆಳೆಯ।

ಕೊರಗುತಿಹ ಜೀವವಿದು
ಪ್ರೀತಿಯು ಸಿಗಲೆಂದು
ಪ್ರೀತಿಯೇ ಮರೆಯಾಯ್ತೇ
ಕೇಳಿ ಕಾಂಚಾಣದ ಕರೆಯ।

ಬಯಸುತಿಹೆ ಎಂದೆಂದು
ಕನಸಾಗಲಿ ನನಸೆಂದು
ಕಣ್ಣಂಚಿನಲ್ಲಿದೆ ನೀರು
ಜಿನುಗದೇಕೆ ಕಂಬನಿಯ।

Thursday, May 31, 2007

ಹಸಿವು

ಸಿಗದ ಸಂಗಾತಿಗಾಗಿ ಹುಡುಕುತಿದೆ ನಾಯಿ,
ಬೆದೆಕಾಲ ಮುಗಿದರೂ ತಣಿಯದ ಕಾವು,
ಇಂಗದ ಕಾಮಕೆ ಮೋಕ್ಷವಿಲ್ಲ

ಹೊಂಚಿ ಕುಳಿತ ಹದ್ದು, ಅದಕೂ ಯಾಕೋ ಜಿದ್ದು,
ಸಿಗದೀಗ ಸತ್ತ ಹೆಣ, ಬಿಡಲೊಲ್ಲದು ಪ್ರಾಣ,
ಮೈಯೊಳಿಲ್ಲ ತ್ರಾಣ

ನೆಟ್ಟ ಬೀಜಕೆ ಸುರಿಯಲು ಸಿಗಲಿಲ್ಲ ನೀರು
ಸಿಕ್ಕ ನೀರೂ ಕೂಡ ಸಾಲದಾಯಿತು ನೋಡ
ಕವಿಯಲಿಲ್ಲ ಕರಿಮೋಡ

ಜಾರಿ ಬಿದ್ದಿದೆ ಬಟ್ಟೆ ಹುಡುಕುತಿದೆ ಕಂಗಳು
ಹಸಿವು ಹೊಟ್ಟೆಯೊಳಗೋ? ಅತೃಪ್ತ ಮನದೊಳಗೋ?
ಅರ್ಥವಿಲ್ಲವೀ ಜೀವನ..

Monday, May 21, 2007

ವೇದನೆ

ಬೇಕಿತ್ತೇ ನನಗೆ ನಿನ್ನ ಪ್ರೀತಿಯ ಸವಿಯನನುಭವಿಸುವ ಹುಚ್ಚು ಆಸೆ?
ಆಗದೀಗ ನನಗೆ ನಿನ್ನ ಅಗಲುವಿಕೆಯ ಸಹಿಸುವ ನೋವ, ನಿರಾಸೆ.
ಬಯಸಿದೆ ನಮ್ಮೀ ಪ್ರೇಮಪುಷ್ಪದ ಘಮಲು ಹರಡಿ ಎಲ್ಲೆಡೆ ಜಗದಲಿ
ಅಸೂಯೆಪಡಲಿ ಜನರು ನಮ್ಮ ಪ್ರೀತಿಯ ಕಂಡು ಹೊಟ್ಟೆಕಿಚ್ಚಿನಲಿ!

ಇನ್ನೆಲ್ಲಿಯ ಘಮಲು ಪ್ರೀತಿಯದು? ಅವರಿವರ ಅಸೂಯೆಯು?
ಕಡಿದುಹೋಯಿತೇ ಹೃದಯವೀಣೆಯಾ ತಂತಿಯು?
ಸಂಬಂಧಗಳ ಗೋಜಲುಗಳಲಿ ಕಳೆದುಕೊಳ್ಳುವಂತಾಯಿತೇ ನಿನ್ನನು?
ನಿನ್ನ ಜೊತೆ ನಾ ಕಳೆದುಕೊಂಡೆನು ನನ್ನ ಜೀವದ ಲಯವನು..

ನಾ ತಪ್ಪು ಮಾಡಲಿಲ್ಲ ನಿನಗೂ ತಿಳಿದಿಹುದು ವಿಷಯವು
ಮನವರಿಕೆ ಮಾಡೆ ನಾ ಸೋತೆನಲ್ಲಾ ಸೋತುಹೊಯಿತೇ ಪ್ರೇಮವು?
ಪ್ರೀತಿಯ ನಶೆಯಲ್ಲಿ ನೀ ಕೊಟ್ಟೆ ಮಾತುಗಳ ಭರವಸೆಗಳಾ ಪೂರ..
ಅಷ್ಟೇ ಬೇಗ ಮರೆತೆಯಲ್ಲೇ ಕೊಟ್ಟು ನೋವನಪಾರ..

ಸಖಿಯೆ ಒಮ್ಮೆ ತಿರುಗಿನೋಡು ನನ್ನೀ ಪರಿತಾಪ, ವೇದನೆ..
ಸುಖದ ಬೆನ್ನತ್ತಿ ನೀ ಕೊಲ್ಲದಿರು ನನ್ನೀ ಸುಂದರವಾದ ಬದುಕನೆ॥
ಬದುಕಲಾಗದು ಸಾಯಬಾರದು ಎಲ್ಲೋ ಒಂದು ಭರವಸೆಯ ಕಿರಣಾ..
ಕಾಲಾಂತರದಿ ನಿನ್ನ ಸೇರೇಸೇರುವೆ ಆಗದಿರಲಿ ನಮ್ಮ ಪ್ರೀತಿಯಾ ಮರಣಾ..

Wednesday, May 2, 2007

ಪ್ರೇಮದ ನಶೆಯಲ್ಲಿ...ಪತ್ರ..

ಪ್ರೀತಿಯ ಸಖಿಗೆ,

ನನ್ನರಸಿ ನಿನ್ನನರಸಿ ಬರುವೆನಲ್ಲಿಗೆ
ನನ್ನ ಬಿಟ್ಟು ನೀನು ಇನ್ನು ಹೋಗಲೆಲ್ಲಿಗೆ?

ನನ್ನ ಜೀವ ನಿನ್ನ ಸೇರಲೆಂದು ತಹತಹಿಸುತಿದೆ
ನಿನ್ನ ನೆನೆಯೆ ನನ್ನ ಮನವು ಕುಣಿದಾಡುತಿದೆ

ನಿನ್ನ ಇರವು ನನ್ನ ಬಾಳ ಸಂಜೀವಿನಿ
ನನ್ನ ಪ್ರೇಮಪುಷ್ಪಕೆ ನೀ ಜೀವದಾಯಿನಿ

ಪ್ರೇಮದಲ್ಲಿ ಲೋಕ ಕುರುಡು ಎಂಬ ಮಾತಿಗೆ
ನನ್ನ ನಿನ್ನ ಪ್ರೀತಿಯೇ ಸಾಕ್ಷಿಯಾಗಿದೆ

ನನ್ನ ಬಾಳ ಪಯಣದಲ್ಲಿ ನೀನೆ ಸಾಥಿಯು
ನಿನಗಾಗಿಯೆ ಮೀಸಲು ನನ್ನ ಪ್ರೀತಿಯು

ನಿನ್ನ ನೋವು ದುಃಖಗಳಲಿ ನಾನೂ ಭಾಗಿಯು
ನನ್ನ ಸುಖದ ಕ್ಷಣಗಳಲಿ ನಿನಗೂ ಭಾಗವು


ನಿನ್ನೊಲುಮೆಯ..ಶ್ರೀ....